ಅತಿಮಾನಸಶಾಸ್ತ್ರ
	
ಅತಿಮಾನಸ ಸಂಶೋಧನೆಯಲ್ಲಿ ಜಾಗೃತಾವಸ್ಥೆಯ ಹೊಸ್ತಿಲನ್ನು ಮೀರುವ ಮನುಷ್ಯನ ವ್ಯಕ್ತಿತ್ವದ ಅಧ್ಯಯನ. 
	
ಮನಶ್ಯಾಸ್ತ್ರ ಮನಸ್ಸನ್ನು ಕುರಿತದ್ದು, ಮನಸ್ಸು ಎಂಬುದು ಸಾಧಾರಣಪ್ರಜ್ಞೆಯಿಂದ ಹೊರಗಿರುವ ಅನೇಕ ಅಂಶಗಳಿಂದ ಕೂಡಿದೆ. ಅಂಥ ಪ್ರe್ಞÁತೀತವಾದ ಅಂಶಗಳ ಆಳವನ್ನೂ ದಿಕ್ಕುಗಳನ್ನೂ ಆಕಾರಗಳನ್ನೂ ಕಂಡುಹಿಡಿಯುವುದೇ ಮನಶ್ಯಾಸ್ತ್ರದ ಉದ್ದೇಶ. ಸಿಗ್ಮಂಡ್ ¥sóÁ್ರಯ್ಡ್ ಪ್ರe್ಞÁಸ್ಥಿತಿಯಲ್ಲಿ ಮನಸ್ಸು ಮನುಷ್ಯನ ಪೂರ್ಣವ್ಯಕ್ತಿತ್ವವನ್ನು ತೋರುವುದಿಲ್ಲವೆಂಬುದನ್ನು, ಅಂಥ ಪ್ರಜ್ಞೆಗಿಂತಲೂ ಆಳದಲ್ಲಿ ನಮಗೆ ಅಗೋಚರವಾಗಿಯೂ ಹೆಚ್ಚು ಚಲನಾತ್ಮಕವಾಗಿಯೂ ಮೂಲಭೂತವಾಗಿಯೂ ಇರುವ ಅಂಶಗಳು ಯಥೇಚ್ಛವಾಗಿವೆ ಎಂಬುದನ್ನು ಕಂಡುಹಿಡಿದ ಮೇಯರ್ಸ್ ಎಂಬ ವಿದ್ವಾಂಸ ದೇಹಾತೀತ ಪುರುಷವಾದವನ್ನು (ಸಬ್ಲಿಮಿನಲ್ ಸೆಲ್ಫ್) ವಿಕಾಸಪಡಿಸಿ ಸಾಧಾರಣಪ್ರಜ್ಞೆ ಸೀಮಿತಾಂಶಮಾತ್ರ ಎಂದು ಒತ್ತಿ ಹೇಳಿ, ಸುಪ್ತಚೇತನ (ಸಬ್‍ಕಾನ್ಷಸ್‍ನೆಸ್) ಅವರೋಧಿತ ಹಾಗೂ ವಿವೇಚನಾರಹಿತ, ವಿಶಾಲಮನಸ್ಸಿನ ಒಂದು ವಿಭಾಗ ಎಂದು ಅರ್ನೆಸ್ಟ್ ಜೋನ್ಸ್ ಹೇಳಿದ. ಗೋಲ್ಡ್ ವಿನ್ ಬೇಯರ್ಸ್‍ನ ಅಭಿಪ್ರಾಯದಲ್ಲಿ ಅಪ್ರe್ಞÁವಸ್ಥೆ ಎಂಬುದು ವೈಯಕ್ತಿಕ ಪ್ರe್ಞÁವಸ್ಥೆಯ ಆವರಣವನ್ನು ಮೀರಿದುದೂ ತ್ರಿಕಾಲದಲ್ಲಿಯೂ ಇರುವ ಸರ್ವ ಅಗೋಚರವಸ್ತುಗಳನ್ನೂ ಒಳಗೊಂಡಿರುವುದೂ ಆಗಿದೆ. ಅದು ಏನೇ ಇರಲಿ, ಮನುಷ್ಯನ ಮನಸ್ಸಿನ ಅದ್ಭುತಸೃಷ್ಟಿಗಳು ಪ್ರe್ಞÁಭಾಗದಿಂದ ಹೊರಬರುವುದಿಲ್ಲ ಎಂಬುದು ಗಮನಾರ್ಹ. ಪ್ರe್ಞÁವಸ್ಥೆ ಚಿಂತನೆಯ ಉತ್ಪತ್ತಿಸ್ಥಾನವಲ್ಲ; ಅದರ ಮುಲುಕುವ ಕವಾಟ ಮಾತ್ರ, ಚಿಂತನೆಯ ಒಳನುಗ್ಗನ್ನು ಗ್ರಹಿಸಿ ಅಭಿವ್ಯಕ್ತಪಡಿಸುವ ದ್ವಾರ ಮಾತ್ರ. 
	
ಕಾಲಕಾಲಕ್ಕೂ ವಿರಳವಾದ, ಅನಿಯತವಾದ, ಮುನ್ಸೂಚಿಸಲಸಾಧ್ಯವಾಗಿ ಕಾಣುವ ಘಟನೆಗಳು ಆಗಿಂದಾಗ್ಗೆ ಸಾಮಾನ್ಯ ನಿತ್ಯಜೀವನದ ಘಟನೆಗಳೊಡನೆ ಬೆರೆಯುವುದು ಮನುಷ್ಯನ ಗಮನಕ್ಕೆ ಬಂದಿದೆ. ಇವುಗಳನ್ನು ಅಲ್ಪಮಾನುಷಿಕ ವಿಷಯಗಳಲ್ಲಿ ಅಮಾನುಷ ದೈವೀಶಕ್ತಿಗಳ ಪ್ರವೇಶಗಳೆಂದು ಪರಿಗಣಿಸಲಾಗದು. ಅಂಥ ಘಟನೆಗಳು ಅಸಾಮಾನ್ಯವಾದಾಗ್ಯೂ ವೈe್ಞÁನಿಕ ವಿವರಣೆಗೆ ನಿಲುಕುವಂತಿರಬೇಕು. ಈಚಿನ ಐವತ್ತು ವರ್ಷಗಳಲ್ಲಿ ಬಾಹ್ಯಪ್ರಪಂಚವನ್ನು ಕಂಡರಿಯಲು ನಮ್ಮ ಪಂಚೇಂದ್ರಿಯಗಳ ವ್ಯಾಪ್ತಿ ಮತ್ತು ಅವಕಾಶ ಎಷ್ಟು ಸೀಮಿತವಾಗಿದೆ ಎಂಬುದನ್ನು ವಿe್ಞÁನ ಕಂಡುಕೊಂಡಿದೆ. ಅತಿಮಾನಸ ಸಂಶೋಧನೆ ಪ್ರೇತವಾದವೂ ಅಲ್ಲ, ಯಾಕ್ಷಣಿಕವಾದವೂ ಅಲ್ಲ, ಅವುಗಳ ಅವಶೇಷವೂ ಅಲ್ಲ. 
	
ಅತಿಮಾನಸಶಾಸ್ತ್ರವನ್ನು ಎರಡು ವಿಧವಾಗಿ ವಿಭಾಗಿಸಬಹುದು. 1. ನಮ್ಮ ಇಂದ್ರಿಯಗಳಿಗೆ ಗೋಚರವಾದಾಗ್ಯೂ ತಿಳಿದ ಸಂಗತಿಗಳಿಂದ ಉದ್ಭವಿಸದ ವಿಷಯಗತ ಘಟನೆಗಳು. ಅವು ಭೌತಿಕಶಾಸ್ತ್ರದ ಗೊತ್ತಾದ ಅಂಗೀಕೃತ ನಿಯಮಗಳಿಗೆ ನಿಲುಕುವುದಿಲ್ಲ. ಉದಾಹರಣೆಗೆ, ದೆವ್ವದಮನೆಗಳು, ವಸ್ತುಗಳ ಅನಿರೀಕ್ಷಿತ ಚಲನೆ ಅಥವಾ ಪ್ರೇತಚೇಷ್ಟೆ. 2. ಮನಸ್ಸಿಗೆ ಅರಿವಾಗಿದ್ದರೂ ನಮ್ಮ ಇಂದ್ರಿಯಗಳಿಗೆ ಗೋಚರವಾಗದಿರುವ ಘಟನೆಗಳು. ಇದು ಅರಿವಿನ ಒಂದು ವಿಚಿತ್ರ ರೀತಿ. ಉದಾಹರಣೆಗೆ, ಭವಿಷ್ಯವಾಣಿ, ಅನ್ಯಮನಃಸ್ಪರ್ಶನ, ಇತ್ಯಾದಿ. ಮನಸ್ಸಿನೊಳಗೆ ಅಪ್ರಕಾಶವಾಗಿ ಹುದುಗಿರುವ, ಗುರುತಿಲ್ಲದ ಕಾರಣಗಳಿಂದ ಉದ್ಭವಿಸುವ ಇಂಥ ಅಸಾಮಾನ್ಯಘಟನೆಗಳನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡುವುದೇ ಅತಿಮಾನಸಶಾಸ್ತ್ರದ ಗುರಿ. ಭೌತವಾದಪ್ರೇರಿತ ಒಲವು (ಮೆಟೀರಿಯಲಿಸ್ಟಿಕ್ ಬಯಾಸ್) ಈ ವಿಷಯಗಳನ್ನು ಮೂಢನಂಬಿಕೆಗಳೆಂದು ವಿಸರ್ಜಿಸುತ್ತದೆ; ಅಥವ ಮನುಷ್ಯನ ಇಹಪರಗಳೆರಡೂ ಅವನ ಮಾಂಸ, ರಕ್ತ, ಮೂಳೆ-ಇವುಗಳನ್ನು ಬಿಟ್ಟು ಇನ್ನೇನು ಇಲ್ಲ ಎಂಬ ಕೇವಲ ದೇಹಸೀಮಿತ ವಿವರಣೆಯನ್ನು ಕೊಡಲು ಯತ್ನಿಸುತ್ತದೆ. ಅದರ ದೃಷ್ಟಿಯಲ್ಲಿ ಧಾರ್ಮಿಕ ಅಥವಾ ನೈತಿಕ ಸಂಪೂರ್ಣತೆಗೆ ಸ್ಥಾನವೇ ಇಲ್ಲ. ಭಾವನೆ, ಚಿಂತನೆ ಮತ್ತು ಮಿದುಳಿನ ಕ್ರಿಯೆಗಳು ಸಮಾನಾಂತರದಲ್ಲಿ ಒಂದಕ್ಕೊಂದು ಬಹು ಹತ್ತಿರವಾಗಿವೆ ಎಂದೂ ಮಿದುಳೇ ನಮ್ಮ ನಡೆವಳಿಕೆಯ ಸಹಜವಾದ ಕೇಂದ್ರ ಎಂದೂ ಅವರು ನಂಬುತ್ತಾರೆ. ಮನುಷ್ಯನು ಸಮಗ್ರವಾಗಿ ಭೌತಿಕವಸ್ತು ಎಂದೂ ಮನಸ್ಸು ಮಿದುಳಿನ ಕೇವಲ ಹೊರಪ್ರಕೃತಿ ಎಂದೂ ಅವರು ತಿಳಿಯುತ್ತಾರೆ. ಆದರೆ ನಮ್ಮ ನಡೆವಳಿಕೆಯನ್ನು ಹತೋಟಿಯಲ್ಲಿಡುವುದು ಮನಸ್ಸೇ. ನಮ್ಮ ನಂಬಿಕೆಗಳು ರೀತಿಗಳು ನೀತಿಗಳು ಆಕಾಂಕ್ಷೆಗಳು ಮೌಲ್ಯಗಳು ತತ್ವಗಳು-ಇವುಗಳನ್ನು ಲಾಲಿಸುವುದು, ಪಾಲಿಸುವುದು ನಮ್ಮ ಮನಸ್ಸೇ. ವ್ಯಕ್ತಿಯ ಸ್ವ್ವಂತ ಪ್ರಪಂಚದಲ್ಲಿ ಹತೋಟಿಕೇಂದ್ರ ಅವನ ವೈಯಕ್ತಿಕ ಅನುಭವಕಾರಣವಾದ ಮನಸ್ಸೇ ಅಥವಾ ವಿಷಯಗೋಚರವಾದ ಆಂಗಿಕ ಮಿದುಳೇ ಎಂಬುದನ್ನು ಇಂದಿನ ಚಿಂತನಶೀಲರು ಇತ್ಯರ್ಥಪಡಿಸಬೇಕು. ಈ ವಿಚಾರಸರಣಿಯಲ್ಲಿ ಯಾವುದು ಸರಿ ಅಥವಾ ಸತ್ಯಕ್ಕೆ ಹೆಚ್ಚು ಸಮೀಪ, ಮನೋಕೇಂದ್ರಿತ ದೃಷ್ಟಿಯೋ ಅಥವಾ ಮಿದುಳುಕೇಂದ್ರಿತ ದೃಷ್ಟಿಯೋ ಎಂಬುದನ್ನು ಸಂಶೋಧನೆಯಿಂದ ಮಾತ್ರ ನಿರ್ಧರಿಸಬೇಕಾಗಿದೆ. ಈಗಿನ ಮನಶ್ಯಾಸ್ತ್ರ ಬಹುತೇಕ ಮಿದುಳುಕೇಂದ್ರಿತವಾಗಿದ್ದು ಅದರ ಗಮನ ಮಿದುಳಿನ ಚಲನಶಕ್ತಿಯ ಕಡೆ ಬಿದ್ದಿದೆ. ವಿe್ಞÁನದ ಆಗಮನದಿಂದ ಪರಂಪರಾಗತವಾಗಿ ಬಂದ ಮನುಷ್ಯನ ಆಧ್ಯಾತ್ಮಕ ನಂಬಿಕೆಗೆ ನಿರ್ಗಮನವಾಗಿದೆ. ಹೀಗೆ ಮನಶ್ಯಾಸ್ತ್ರ ಹೆಚ್ಚು ಹೆಚ್ಚಾಗಿ ಭೌತಿಕಕಲ್ಪನೆಗಳಿಂದಲೇ ತುಂಬಿಹೋಗಿದೆ. 
	
ಆದಾಗ್ಯೂ ಅನೇಕ ಮೇಧಾವಿಗಳು ತಮಗೆ ಬಹುದೂರದ ವಾಸ್ತವ್ಯಗಳ ಸ್ಪಷ್ಟ ದರ್ಶನವನ್ನು ಇಂದ್ರಿಯಗಳ ಮೂಲಕವೂ ತರ್ಕಮೀಮಾಂಸೆಯಿಂದಲೂ ಅಲ್ಲದೆ ನೇರವಾಗಿಯೂ ಪಡೆದಿರುತ್ತಾರೆ. ಅವರು ಬಹುದೂರದಲ್ಲಿನ ಆಪ್ತರಿಗೆ ಒದಗಿದ ಕಷ್ಟಗಳ, ಮುಂದೆ ನಡೆಯಲಿರುವ ಘಟನೆಗಳ, ರೂಪರೇಖೆಗಳ ದರ್ಶನವನ್ನು ಸ್ಪಷ್ಟವಾಗಿ ಕಂಡಂತೆ ವರದಿ ಮಾಡಿದ್ದಾರೆ. ಗಣನೀಯ ಸಂಖ್ಯೆಯ ಜನರು, ಸತ್ತವರ ಆಭಾಸವಾದಂತೆಯೂ ಗತಿಸಿದವರೊಡನೆ ಸಂದೇಶ ಪ್ರಚಾರ ಮಾಡಿದಂತೆಯೂ ವರದಿ ಮಾಡಿದ್ದಾರೆ. ಈ ಅನುಭವಗಳು ತರ್ಕe್ಞÁನವನ್ನು ಪ್ರತಿಭಟಿವೆಂದೂ ತೋರುತ್ತವೆ. ಇಂಥ ಘಟನೆಗಳು ಅಪರೂಪವೂ ಅಸಾಧಾರಣವೂ ದೃಢಪಡಿಸುವುದಕ್ಕೆ ಕಷ್ಟವೂ ಆಗಿದ್ದು ಮಡಿವಂತ ವಿe್ಞÁನದ ಅನಾದರಣೆಗೆ ಒಳಗಾದುದರಲ್ಲಿ ಆಶ್ಚರ್ಯವಿಲ್ಲ. ಆದರೆ ಕೆಲವು ಧೀರ ವಿe್ಞÁನಿಗಳು ಅಂಥ ವಿದ್ಯಮಾನಗಳನ್ನುಪರೀಕ್ಷಿಸುವ ಧೈರ್ಯಮಾಡಿದ್ದಾರೆ. 
	
ಅಂಥ ಘಟನೆಗಳು ಅತಿಮಾನಸಿಕವೆಂದೂ ಅವುಗಳ ಅಧ್ಯಯನ ಅತಿಮಾನಸಿಕ ಸಂಶೋಧನೆ ಎಂದೂ ಕರೆಯಲ್ಪಟ್ಟವು. ಅಮೆರಿಕದ ವಿಶ್ವವಿದ್ಯಾನಿಲಯವೃತ್ತಗಳಲ್ಲಿ ರೂಢಿತತತ್ವಗಳಿಗೆ ಹೊರತಾದ ಈ ತರಹ ವಿದ್ಯಮಾನಗಳ ಅಧ್ಯಯನಕ್ಕೆ ಅತಿಮಾನಸಶಾಸ್ತ್ರವೆಂಬ ಹೆಸರಿದೆ. ಇದರ ಅಂಗವಾಗಿ ಯುಕ್ತ ಅಧ್ಯಯನ ಮಾಡಲು ಒತ್ತಾಸೆಯಾಗುವ ಸಂಘಗಳು ವಿವಿಧ ದೇಶಗಳಲ್ಲಿ ಸ್ಥಾಪಿತವಾಗಿವೆ. ಅವುಗಳಲ್ಲಿ ಮೊದಲನೆಯದು 1852ರಲ್ಲಿ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿತವಾದ ಅತಿಮಾನಸಸಂಶೋಧನಸಂಘ. ಭೌತವಿe್ಞÁನಿ ವಿಲಿಯಂ ಬ್ಯಾರೆಟ್‍ರವರ ಮುಂದಾಳುತನದಲ್ಲಿ ಮೊಸೆಸ್ ಎಂಬ ಪಾದ್ರಿಯೂ ಪ್ರೌಢ ಪ್ರಾಚೀನ ಸಾಹಿತ್ಯಧುರೀಣ ಫ್ರೆಡರಿಕ್ ಡಬ್ಲ್ಯೂ. ಎಚ್. ಮೈಯರ್ಸ್ ಎಂಬವರೂ ಸೇರಿ ಪ್ರಾಯೋಗಿಕ ಅನ್ಯಮನಃಸ್ಪರ್ಶನ, ಚಿತ್ತವಿಭ್ರಮೆ, ಪ್ರೇತವಾಹಕರತೆ ಮುಂತಾದ ವಿಷಯಗಳಲ್ಲಿ ಶೋಧನೆ ಮಾಡಿದರು. ದೇಶದ ಅನೇಕ ಗಣನೀಯ ಬುದ್ಧಿವಂತರು ಬೇಗನೆ ಈ ಕಾರ್ಯಕ್ರಮಕ್ಕೆ ಸೇರಿದರು. ಇದಕ್ಕೆ ಮುನ್ನ ಕೇಂಬ್ರಿಡ್ಜ್‍ನಲ್ಲಿ ಪ್ರೇತ ಸಂಘ ಎಂಬುದಿತ್ತು. ಆಕ್ಸ್‍ಫರ್ಡ್‍ನಲ್ಲಿಯೂ ಇದೇ ಮಾದರಿಯ ಸಂಘ ಪ್ರೊಫೆಸರ್ ಮಾರ್ಗನ್, ಆಲ್ಫ್ರೇಡ್ ರಸೆಲ್ ವ್ಯಾಲೆಸ್, ಮತ್ತು ಸರ್ ವಿಲಿಯಂ ಕ್ರುಕ್ಸ್ ಇವರುಗಳಿಂದ ಸ್ಥಾಪಿಸಲ್ಪಟ್ಟಿತು. ಅಮೆರಿಕದಲ್ಲೂ ಇಂಥ ಸಂಸ್ಥೆಯೊಂದನ್ನು ಸ್ಥಾಪಿಸಿ ಅತಿಮಾನಸಿಕ ವಿದ್ಯಮಾನಗಳನ್ನು ತನಿಖೆ ಮಾಡಲು ವಿಲಿಯಂ ಜೇಮ್ಸ್ ವಿಶೇಷವಾಗಿ ಶ್ರಮಿಸಿದ. 
	
ವಿe್ಞÁನಿಗಳು, ಈ ಮೊದಲಿನ ಸಂಶೋಧಕರ ವಿರುದ್ಧ ತೀವ್ರ ಖಂಡನೆಗಳನ್ನು ಒಡ್ಡಿದರು. ಅದೆಲ್ಲ ತಳಹದಿಯಿಲ್ಲದ ಕಾಡುಹರಟೆ, ವಾಹಕರೆನಿಸಿಕೊಂಡವರೆಲ್ಲ ಮೋಸಗಾರರು, ಬೂಟಾಟಿಗರು ಎಂದರು. ಅನೇಕ ವಿe್ಞÁನಿಗಳು ಆ ವಿಚಾರವನ್ನು ತಾಟಸ್ಥ್ಯದಿಂದಲೂ ವೈಷಮ್ಯದಿಂದಲೂ ಅವಹೇಳನದಿಂದಲೂ ಕಂಡರು. ಅತಿಮಾನಸಸಂಶೋಧಕರನ್ನು ಯಾಕ್ಷಣಿಕರೆಂದು ಹೀಯಾಳಿಸಿದರು. ಆದಾಗ್ಯೂ ಸರ್ ಆಲಿವರ್ ಲಾಡ್ಜ್, ಫ್ಲಮೇರಿಯನ್, ಗಿಲ್ಬರ್ಟ್ ಮರ್ರೆ, ಜೇಮ್ಸ್ ಹೈಸ್ಲೋಪ್ ಇನ್ನೂ ಇತರ ಗಣ್ಯವ್ಯಕ್ತಿಗಳು ತಾವು ಕೈಗೊಂಡ ಪ್ರಯೋಗಗಳನ್ನು ಧೃತಿಗೆಡದೆ ಮುಂದುವರಿಸಿದರು. ವಿe್ಞÁನದ ಚರಿತ್ರೆಯಲ್ಲಿ ಯಾವಾಗಲೂ ನೂತನ ಸಂಶೋಧನೆಗಳು ಪ್ರಚಲಿತ ನಂಬಿಕೆಗಳಿಗೆ ಹೊಂದುವುದಿಲ್ಲವೆಂದು ನಿರಾಕರಿಸಲ್ಪಟ್ಟಿವೆ. ಇದೇ ಗತಿ ಮುಂಚಿನ ಅನೇಕ ಅತಿಮಾನಸಸಂಶೋಧನೆಗಳಿಗೂ ಒದಗಿತ್ತು. ವಿe್ಞÁನ ಎರಡು ಬಗೆ: ಒಂದು ಅವಲೋಕನದ (ಅಬ್ಸರ್ವೇಷನ್) ಆಸ್ತಿಭಾರದ ಮೇಲೆ ನಿಂತದ್ದು; ಇನ್ನೊಂದು ಪ್ರಯೋಗಿಕ ಆಯಕಟ್ಟನ್ನುಳ್ಳದ್ದು. ಅತಿಮಾನಸಶಾಸ್ತ್ರ ಈ ಎರಡು ಗುಂಪಿಗೂ ಸೇರಿದೆ. ಅವಲೋಕನದ ದೃಷ್ಟಿಯಿಂದ ಅದಕ್ಕೆ ಯಥೇಚ್ಛ ಲಿಖಿತ ಸಾಕ್ಷ್ಯಗಳಿವೆ. ಹಿಂದೆಯೇ ಸೂಚಿಸಿರುವಂತೆ, ಇಂದ್ರಿಯಗಳ ಸಹಾಯವಿಲ್ಲದೆ ವಿಷಯಗಳ ಪ್ರತಿರೂಪ ದರ್ಶನಾನುಭವವನ್ನು ಪಡೆಯಲು ಅರ್ಹತೆ ಕೊಡುವ ಶಕ್ತಿಯನ್ನು ವ್ಯಕ್ತಿ ಹೊಂದಿರುವುದು ಅಸಂಭಾವ್ಯವೇನಲ್ಲ. ಅಂಥ ಶಕ್ತಿಯುತ ವ್ಯಕ್ತಿ ಸಹಜಂತರ್‍ದೃಷ್ಟಿಯುಳ್ಳವನೂ ಬಹುಸೂಕ್ಷ್ಮನೂ ಆಗಿ, ಯಾವ ಪ್ರತ್ಯಕ್ಷ ಸೌಲಭ್ಯವೂ ಇಲ್ಲದೆ, ವಿಷಯಗಳನ್ನು ನೋಡಲೂ ಕೇಳಲೂ ನಿವೇದಿಸಲೂ ಸಮರ್ಥನಾಗುತ್ತಾನೆ. ಆದರೆ, ಸಾಮಾನ್ಯವಾಗಿ ಒಬ್ಬರ ಮನಸ್ಸು ಇನ್ನೊಬ್ಬರ ಮನಸ್ಸಿನೊಡನೆ ಸಂಪರ್ಕಹೊಂದುವುದು ಇಂದ್ರಿಯಗಳ ಮೂಲಕವಲ್ಲದೆ ಅಗೋಚರವಾದ, ವಿಶೇಷ ರೀತಿಯಲ್ಲೂ ಸಾಧ್ಯ ಎಂದು ಭಾವಿಸುವುದಕ್ಕೂ ವೈe್ಞÁನಿಕ ನಂಬಿಕೆಗಳು ಎಡೆಗೊಡುವುದಿಲ್ಲ. ಪ್ರೌಢಪಾಂಡಿತ್ಯವಲಯಗಳಲ್ಲಿ ಇಂಥ ನಂಬಿಕೆಗೆ ಮೀರಿದ ಘಟನೆಗಳನ್ನು ತಾರ್ಕಿಕವಾಗಿ ಚರ್ಚಿಸುವುದಕ್ಕೆ ಕೂಡ ವಿಶ್ವಾಸವಿಲ್ಲದಿದ್ದಾಗಲೂ ಹಾರ್ವರ್ಡ್, ಸ್ಟ್ಯಾನ್‍ಫರ್ಡ್ ವಿಶ್ವವಿದ್ಯಾನಿಲಯಗಳಲ್ಲೂ ಇನ್ನೂ ಕೆಲವಡೆಗಳಲ್ಲೂ 1930ರವರೆಗೂ ಸಾಗಿದ ಪ್ರಯತ್ನ. ವಲಯ ಮಗ್ಡೂಗಲ್ ಮತ್ತು ಜೆ. ಬಿ. ರ್ರೈನ್ ಇವರ ನಾಯಕತ್ವಗಳ ಫಲ-ಇವುಗಳಿಂದಾಗಿ ಡ್ಯೂಕ್ ವಿಶ್ವವಿದ್ಯಾನಿಲಯದಲ್ಲಿ ಒಂದು ಅತಿಮಾನಸ ಪ್ರಯೋಗಶಾಲೆ ಸ್ಥಾಪಿಸಲ್ಪಟ್ಟು ಗಮನಾರ್ಹ ಪ್ರಮಾಣದಲ್ಲಿ ಸಂಶೋಧನೆಗಳು ಹೊರಬಿದ್ದುವು. ಹೀಗೆಯೆ ಲಂಡನ್, ಅಮೆರಿಕ, ಯುರೋಪುಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಮನಸ್ಸಿನ ಸರಹದ್ದು, ವ್ಯಕ್ತಿತ್ವದ ಪರಿಮಿತಿ ದೇಹವ್ಯಾಪರಗಳನ್ನೆಲ್ಲ ಮೀರಿದ್ದಾಗಿವೆ ಎಂದು ಈ ಶೋಧನೆಗಳು ತೋರಿಸುತ್ತವೆ. ಡಾ. ರ್ರೈನ್‍ರವರ ಶ್ರಮಫಲಗಳಾದ ನ್ಯೂ ಫ್ರಾನ್‍ಟಿಯರ್ಸ್ ಆಫ್ ಮೈಂಡ್ ಮತ್ತು ರೀಚ್ ಆಫ್ ಮೈಡ್ ಎಂಬ ಗ್ರಂಥಗಳು ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನೊಳಗೊಂಡಿವೆ. 

ಪದಪ್ರಯೋಗಗಳು: ಮನಶ್ಯಾಸ್ತ್ರ ಮನೋಜೀವನದ ಅಧ್ಯಯನವಾದರೆ ಅತಿಮಾನಸಶಾಸ್ತ್ರ (ಪ್ಯಾರಾಸೈಕಾಲಜಿ) ಅಥವಾ ಫ್ರೆಂಚರು ಕರೆವಂತೆ ಮಾನಸ ಪ್ರೇತಾವಾಹನೆ (ಮೆಟಸೈಕಾಲಜಿ) ಅಸಾಮಾನ್ಯ ಮನೋಘಟನೆಗಳನ್ನು ಪರಿಶೀಲಿಸುತ್ತದೆ. ಹಿಂದಿನಿಂದ ವರದಿಯಾಗಿರುವ ಸ್ವಯಂಪ್ರೇರಿತ ಅತಿಮಾನಸವಿದ್ಯಮಾನಗಳನ್ನು ಎಷ್ಟರಮಟ್ಟಿಗೆ ಶಾಸ್ತ್ರೀಯವಾಗಿ ಇತ್ಯರ್ಥಪಡಿಸಬಹುದು ಎಂಬುದನ್ನು ಕಂಡುಕೊಳ್ಳುವುದು ಅದರ ಉದ್ದೇಶ. ಈ ಶಾಸ್ತ್ರ ಆಧ್ಯಾತ್ಮಿಕ ಸಿದ್ಧಾಂತಗಳಿಂದ ಬೇರೆಯಾಗಿರುವುದು. ಅದರ ಅಧ್ಯಯನ ಅಂತೆಕಂತೆಗಳ ಪರಿಶೀಲನವಾಗಿರದೆ ಶುದ್ಧ ಪ್ರಾಯೋಗಿಕ ಮಾರ್ಗವನ್ನು ಅನುಸರಿಸಿದೆ. ಅತಿಮಾನಸ ಸಂಶೋಧನಕ್ರಮ ಮೆಟಸೈಕಿಕ್ಕಸ್ ಪ್ರೇತಾವಾಹನೆಯ ವಿಚಾರವಾದ ಶೋಧನೆ. ಈ ಪದವನ್ನು ಮನಶ್ಯಾಸ್ತ್ರದ ಗೊತ್ತಾದ ಸೂತ್ರ ಸಿದ್ಧಾಂತಗಳನ್ನು ಮೀರುವ ಘಟನೆಗಳು ಎಂದು ಅರಿಸ್ಟಾಟಲನು ವಿವರಿಸಿದ್ದರೂ ಕೆಲವರು ಅದನ್ನು ಅತಿಮಾನಸಿಕ ಘಟನೆಗಳು ಎಂದು ಥೌಲೆಸ್, ರೀಷೆ ಮುಂತಾದ ವಿದ್ವಾಂಸರು ಸೈ-ಘಟನೆಗಳು ಎಂದೂ ಮತ್ತೆ ಕೆಲವರು ದೂರಸಾಕ್ಷಾತ್ಕಾರ (ಟೆಲೆಸ್ಥೆಸಿಸ್) ಪೂರ್ವವಿe್ಞÁನ (ಘೋರ್ ನಾಲೆಡ್ಜ್) ಅತಿಪ್ರೇಕ್ಷೆ (ಅಲ್ಟ್ರ ಕಾಕ್ವಿಷನ್) ಎಂದೂ ಕರೆದರು. ಆದರೆ ಈ ಅಸಾಧಾರಣ e್ಞÁನಸೋಪಾನ, ಅರಿವು ಕೊಡುವ ಇಂದ್ರಿಯಕ್ರಿಯೆಗಳಿಂದ ಬೇರೆಯಾಗಿರುವುದರಿಂದ ರ್ರೈನ್ ಎಂಬುವನು ಇದನ್ನು ಅತೀಂದ್ರಿಯe್ಞÁನ ಎಂದಿದ್ದಾನೆ. ಒಟ್ಟಿನಲ್ಲಿ ಈ ಎಲ್ಲ ಪದಗಳು ಸ್ವಂತ ಅಭಿಪ್ರಾಯಗಳನ್ನು ಸೂಚಿಸತಕ್ಕವು. 
	
ಇದೇ ರೀತಿಯಲ್ಲಿ, ವಸ್ತುಚಲನವಲನಗಳನ್ನೊಳಗೊಂಡ ವ್ಯಕ್ತ, ಅಸಾಮಾನ್ಯ ಘಟನೆಗಳನ್ನು ಸೂಚಿಸಲು ಕೆಲವು ಪದಗಳು ಪ್ರಯೋಗಕ್ಕೆ ಬಂದಿವೆ. ಯಾವ ಬಾಹ್ಯ ಶಕ್ತಿಯ ಪ್ರಚೋದನೆಯೂ ಇಲ್ಲದೆ ಮೇಜು ತಿರುಗುವುದು, ದೆವ್ವದ ಮನೆಗಳಲ್ಲಿ ಕಲ್ಲುಗಳ ಹಾರಾಟ-ಮುಂತಾದ ನಿರ್ಜೀವ ವಸ್ತುಗಳ ಚಲನೆಯನ್ನುಂಟುಮಾಡುವ ವಿದ್ಯಮಾನಗಳಿಗೆ ದೂರಕ್ರಿಯಾಶಕ್ತಿ (ಟೆಲೆಕೈನೆಸಿನ್) ಎಂಬ ಪದವನ್ನು ರೀಷೆ ಉಪಯೋಗಿಸಿದ. ಅದೇ ವಿದ್ಯಮಾನಗಳನ್ನು ಸೂಚಿಸಲು ಮಾನಸಿಕಕ್ರಿಯಾಶಕ್ತಿ (ಸೈಕೊಕೈನೆಸಿಸ್) ಎಂಬ ಪದವನ್ನು ಉಪಯೋಗಿಸಿ, ಅಶರೀರಶಕ್ತಿಯ ವಾಸ್ತವ್ಯ ದರ್ಶನ, ಲಘಿಮ, ಪರಕಾಯಪ್ರವೇಶ ಮುಂತಾದ ಅಲೌಕಿಕ ವಿದ್ಯಮಾನಗಳ ಆಗುವಿಕೆಯನ್ನು ರ್ರೈನ್ ಸೂಚಿಸುತ್ತಾನೆ. 

ಅನ್ಯಮನಃಸ್ಪರ್ಶನ : ಅಕ್ಷರಶಃ ಇದರ ಅರ್ಥ ದೂರಭಾವಪ್ರೇಕ್ಷಣೆ (ಟೆಲೆಪತಿ). ಮೈಯರ್ಸ್ ಈ ಪದಕ್ಕೆ ಇಂದ್ರಿಯ ಕ್ರಿಯಾತೀತವಾದ ಮನಸ್ಸು. ಮನಸ್ಸಿನ ಸಂಪರ್ಕ ಎಂಬ ಅರ್ಥ ಕೊಟ್ಟ. ಅವರಿಗೆ ಭಾವಪ್ರೇಕ್ಷಣೆ (ಥಾಟ್ ಟ್ರಾನ್‍ಸ್ಫರೆನ್ಸ್) ಎಂಬ ಪದ ಅಷ್ಟಾಗಿ ಹಿಡಿಸಲಿಲ್ಲ. ಜಾನ್ ಇರ್‍ಹ್ಯನ್ ವಾಲ್ಡರ್‍ನ ಪ್ರಕಾರ ಅಸಮೀಪಾನುಕಂಪ ಎಂಬುದು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮಾನಸಿಕ ಪ್ರಕಾರ ವಿಕಾರಗಳನ್ನು ಇಂದ್ರಿಯ ಸಹಾಯವಿಲ್ಲದೆ ಮನಗಾಣುವುದು. ಒಂದು ಮನಸ್ಸಿಗೂ ಇನ್ನೊಂದು ಮನಸ್ಸಿಗೂ-ವಿe್ಞÁನಕ್ಕೆ ಇನ್ನೂ ಎಟುಕದಿರುವ ರೀತಿಯಲ್ಲಿ ಉಂಟಾಗುವ ನೇರಸಂಪರ್ಕಕ್ರಿಯೆ ಎಂದು ಸರ್ ಆಲಿವರ್ ಲಾಡ್ಜ್ ಇದೇ ಪದಕ್ಕೆ ಅರ್ಥ ಕೊಟ್ಟಿದ್ದಾನೆ. ದೂರಭಾವಪ್ರೇಕ್ಷಣೆ ಇತರ ಅತಿರೇಕ ಅರಿವಿಕೆಯಿಂದ ಕಳುಹಿಸುವವ, ಸ್ವೀಕರಿಸುವವ, ಹೀಗೆ ಎರಡು ವ್ಯಕ್ತಿಗಳನ್ನೊಳಗೊಂಡ ವಿಶೇಷ ಅನುಭವ ಎಂದು ಕಾಣಿಸಿಕೊಂಡು ಬೇರೆಯಾಗಿರುತ್ತದೆ. ಅನ್ಯಮನಃಸ್ಪರ್ಶನ ಚಿತ್ತವಿಭ್ರಮೆಗಳ (ಹೆಲೂಸಿನೇಷನ್ಸ್) ಮುಖೇನ ತೋರಬಹುದು. ಸಾಧಾರಣ ಭ್ರಮಣೆಯಲ್ಲಿ ಜಾಗೃತಾವಸ್ಥೆಯ ಕೆಳಗಿರುವ ಯಾವುದೋ ಅಂಶ ವ್ಯಕ್ತಿಯಲ್ಲಿ ಒಂದು ಪ್ರತಿಮೆಯನ್ನು ಸೃಷ್ಟಿಸುತ್ತದೆ. ಆದರೆ ಅಸಮೀಪಾನುಕಂಪದಲ್ಲಿ ಕಂಪನ ಅದನ್ನು ಉಂಟುಮಾಡುವ ಬೇರೊಬ್ಬ ವ್ಯಕ್ತಿಯ ಪ್ರೇರಣೆಯಿಂದ ಉಂಟಾಗುತ್ತದ. ಅಸಮೀಪಾನುಕಂಪನದಿಂದುಂಟಾದ ಭ್ರಮಣೆ ಅಭೌತಿಕ. ಇದರ ಕಾರಣ ಅನುಕಂಪವನ್ನು ಪ್ರೇರಿಸುವ ವ್ಯಕ್ತಿಯ ಮನಸ್ಸಿನ ಪ್ರಭಾವಕ್ಕೊಳಗಾಗಿದ್ದು ಅನುಕಂಪ ಸ್ವೀಕೃತವ್ಯಕ್ತಿಯಲ್ಲಿ ಜಾಗೃತ ಅನುಭವದ ಅರಿವನ್ನುಂಟುಮಾಡುತ್ತದೆ. ಅನುಕಂಪಸ್ವೀಕೃತವ್ಯಕ್ತಿಗೆ ಕಳುಹಿಸಿದೆ ಸಂಜ್ಞೆಗಳು ಇಂದ್ರಿಯವಾಗಿರಬೇಕಾಗಿಲ್ಲ. ಅಲ್ಲದೆ ಅವು ಆಂತರಿಕಭಾವನೆಗಳೂ ಭಾವೋದ್ರೇಕಗಳೂ ಅಥವಾ ಪ್ರೇರಣೆಯೂ ಆಗಬಹುದು. ಅತಿ ದೂರದಲ್ಲಿರುವ ಅತ್ಮೀಯ ವ್ಯಕ್ತಿಯ ಸಾವುನೋವುಗಳ ದುಃಖದ ಸಮಾಚಾರ ತಿಳಿಯುವ ಮುನ್ನವೇ ಅನುಕಂಪಸ್ವೀಕೃತ ವ್ಯಕ್ತಿಯಲ್ಲಿ ಅಸಮೀಪಾನುಕಂಪದ ಉದ್ರೇಕವಾಗಬಹುದು. ಡಾ. ಅಜಮ್ ಅಸಮೀಪಾನುಕಂಪವಶೀಕೃತ (ಹಿಪ್ನೊಟೈಸ್ಡ್) ವ್ಯಕ್ತಿಗಳಲ್ಲಿ ಉಂಟಾಗುವುದನ್ನು ಕಂಡುಕೊಂಡ. ಆತ ಡಾ.ರೀಷೆ ಅಸಮೀಪಾನುಕಂಪದ ಪ್ರಯೋಗಗಳನ್ನು ಸಾಮಾನ್ಯಸ್ಥಿತಿ ಮತ್ತು ವಶೀಕರಣಸ್ಥಿತಿಗಳಲ್ಲಿ ನಿರ್ಗಂಧವಸ್ತುಗಳನ್ನುಪಯೋಗಿಸಿ ಆ ಬಗೆಯ ಅನುಕಂಪನದ ಇರುವಿಕೆಗೆ ಸಾಕ್ಷ್ಯವನ್ನು ಕಂಡರು. 
	
ಹೀಗೆ ಅನೇಕಾನೇಕ ಸ್ವಯಂ ಮತ್ತು ಪ್ರಾಯೋಗಿಕ ಅಸಮೀಪಾನುಕಂಪದ ಇರವನ್ನು ಸೂಚಿಸಿವೆ. ಈ ವಿಚಾರದಲ್ಲಿ ಟೈರಲ್, ಯಾನ್, ಹೆನ್ರಿ ಸಿಡ್ಜ್‍ವಿಕ್, ಶ್ರೀಮತಿ ಸಿಂಕ್ಲೇರ್, ಡೆಚ್ನರ್ ಅಲ್ಲದೆ ಡ್ಯೂಕ್, ಹಾರ್ವರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳ ಅಧ್ಯಯನಶೀಲರೂ ಈ ಅನುಭವದ ಅನೇಕ ದೃಷ್ಟಾಂತಗಳನ್ನು ವರದಿ ಮಾಡಿದ್ದಾರೆ. 

ಅತೀಂದ್ರಿಯ ದೃಷ್ಟಿ : ಇದು ಅಸಮೀಪಾನುಕಂಪದ ಸಹೋದರಿಯಂತಿದೆ (ಕ್ಲೇರ್ವಾಯೆನ್ಸ್). ಡಾ. ರ್ರೈನರ ಅಭಿಪ್ರಾಯದಲ್ಲಿ ಅವೆರಡೂ ಸಾಧಾರಣವಾಗಿ ಒಂದೇ. ಅತೀಂದ್ರಿಯ ದೃಷ್ಟಿ ಎಂದರೆ ಇಂದ್ರಿಯಗಳ ಸಹಾಯವಿಲ್ಲದೆ ಆಗುವ ದೂರದ ವಸ್ತುಗಳ ಅಥವಾ ಘಟನೆಗಳ ಅರಿವಿನ ಅನುಭವ. ಆದರೆ ಅಸಮೀಪ ಅನುಕಂಪದಲ್ಲಿ ಒಂದು ವ್ಯಕ್ತಿಯ ಚಿಂತನದ ಅರಿವು ಇನ್ನೊಂದು ವ್ಯಕ್ತಿಗೆ ಇಂದ್ರಿಯಾತೀತವಾಗಿ ಆಗುವುದು. 
	
ಮೆಸ್ಮರ್ ಕೃತಕ ನಿದ್ರಾವಸ್ಥೆಗೊಳಪಡಿಸಿದ ವ್ಯಕ್ತಿಯ ಅತೀಂದ್ರಿಯ ದೃಷ್ಟಿಶಕ್ತಿಯನ್ನು ಉಪಯೋಗಿಸಿಕೊಂಡು ಕಾಯಿಲೆಗಳ ಸ್ಥಿತಿಗತಿಗಳನ್ನು ನಿರ್ಧರಿಸುತ್ತಿದ್ದ. ಕೆಲಕಾಲಾನಂತರ ಟಿಚ್ನರ್ ಅತೀಂದ್ರಿಯ ದೃಷ್ಟಿ ಕೆಲವು ವ್ಯಕ್ತಿಗಳ ಆಂತರಿಕ ಸ್ವಾಂತ ದೈವದತ್ತ ಯೋಗ್ಯತೆ ಎಂದು ಕಂಡುಕೊಂಡ. ಈ ಅತೀಂದ್ರಿಯ ದೃಷ್ಟಿಶಕ್ತಿಯ ಪ್ರಯೋಗವನ್ನು ಬಹು ಜನರು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಪ್ರೈಜ್ ಎಂಬುವನು ಅನೇಕರನ್ನು ಪರೀಕ್ಷಿಸಿ ಈ ಪೈಕಿ ಅನೇಕರು ಕಪಟಿಗಳಾದರೂ ಕೆಲವರಾದರೂ ಸಾಚಾ ಎಂದು ಹೇಳುತ್ತಾನೆ. ಹೆಸ್‍ಲಾಪ್ ಎಂಬುವನು ಒಬ್ಬ ಅತೀಂದ್ರಿಯ ದೃಷ್ಟಿಯುಳ್ಳ ಹೆಂಗಸು ಕಾಯಿಲೆಯವರು ಬಂದಾಗ ತನ್ನ ಶರೀರವನ್ನೆ ನೆತ್ತಿಯಿಂದ ಅಂಗುಷ್ಟದವರೆಗೂ ಸೂಕ್ಷ್ಮವಾಗಿ ಪರೀಕ್ಷಿಸಿಕೊಂಡು ರೋಗಿಗಳ ರೋಗರುಜಿನಗಳನ್ನು ನಿರ್ಧರಿಸುತ್ತಿದ್ದುದನ್ನು ಉದಾಹರಿಸಿದ್ದಾರೆ. ಈ ವಿಶೇಷ ಶಕ್ತಿಯ ನಿರೂಪಣೆ ಭಾರತೀಯ ಪ್ರಾಚೀನ ಕೃತಿಗಳಲ್ಲಿ ಛಾಯಾಪುರುಷ ಸಾಕ್ಷಾತ್ಕಾರ ಯೋಗ ಎಂಬಲ್ಲಿ ಬಂದಿದೆ. ಅತೀಂದ್ರಿಯ ದೃಷ್ಟಿಯುಳ್ಳವನು ದೂರಸ್ಥಳದಲ್ಲಿ ನಡೆಯುವ ಘಟನೆಗಳ ಅಕಾಯ ಅನುದರ್ಶನ ಪಡೆದು, ಕೊಡುವ ಸಮಾಚಾರಗಳನ್ನು ಅನಂತರ ರುಜುವಾತು ಮಾಡಿದ್ದಾರೆ. ತನ್ನ ಪರೀಕ್ಷೆಗೊಳಗಾದ ನಿದ್ರಾಸಂಚರಣ ವ್ಯಕ್ತಿ ನಿಷ್ಪಾರದರ್ಶಕ ಲಕೋಟೆಗಳಲ್ಲಿಟ್ಟ ಇಸ್ಪೀಟ್ ಎಲೆಗಳನ್ನು ಗುರುತಿಸಿದ್ದನ್ನು ರೀಷೆ ನಿದರ್ಶಿಸಿದ್ದಾನೆ. ಹಿಸ್ಲಾಪ್, ಸಿಂಕ್ಲೇರ್ ಮತ್ತಿತರರು ಜಾಗೃತಾವಸ್ಥೆಯಲ್ಲೂ ಅತೀಂದ್ರಿಯ ದೃಷ್ಟಿ ಪ್ರದರ್ಶಿತವಾಗಿರುವುದನ್ನು ಪ್ರಾಯೋಗಿಕವಾಗಿ ಕಂಡಿರುವುದನ್ನು ವರದಿಮಾಡಿದ್ದಾರೆ. ಅತೀಂದ್ರಿಯ ದೃಷ್ಟಿಯಿಂದ ರೋಗಗಳನ್ನು ಪತ್ತೆಹಚ್ಚಿರುವ ಹಲವು ಸಂದರ್ಭಗಳನ್ನು ಪೇಯ್ನ್ ಮತ್ತು ಬೆಂಡಿಟ್ ವರದಿಮಾಡಿದ್ದಾರೆ. ಮೇಲೆ ಹೇಳಿದ ಎಲ್ಲ ವಿಷಯಗಳು ಅಸಾಮಾನ್ಯ ರೀತಿಯಲ್ಲಿ ತಿಳಿಯುವ ಸಾಧ್ಯತೆಯ ನಿದರ್ಶನಗಳು. 
ಪೂರ್ವಬೋಧೆ : ಆಗಬಹುದಾದ್ದನ್ನು ಘಟನೆಗೆ ಮೊದಲೇ ಗುರುತಿಸುವ ಶಕ್ತಿ (ಪ್ರಿಕಾಗ್ನಿಷನ್). ಗ್ರಹಣಗಳು, ಋತುಗಳು ಮತ್ತು ಸ್ವಾಭಾವಿಕ ಘಟನೆಗಳ ವಿಚಾರವಾಗಿ ಅವು ನಡೆವ ಮೊದಲೆ ನಿಶ್ಚಿತ ನಿಯಮಗಳನುಸಾರ ನುಡಿಯಬಹುದು. ಮುನ್ನರಿವಿನಲ್ಲಿ ಮುಂಬರುವ ಸಾವು, ರೋಗ, ಆಕಸ್ಮಿಕಗಳು, ಆಸ್ತಿಕ್ಷಯ, ಉತ್ತರಾಧಿಕಾರಿ, ಕಷ್ಟನಷ್ಟಗಳು-ಮುಂತಾದವನ್ನು ಹಿನ್ನೆಲೆಯ ಸಹಾಯವಿಲ್ಲದೆ, ಇನ್ನಾವ ತಿಳಿದ ಕುರುಹೂ ಇಲ್ಲದೆ, ಮೊದಲೇ ಕಾಣಬಹುದು. ಸ್ವತಃಪ್ರೇರಿತ ಪೂರ್ವಬೋಧೆಯ ಅನೇಕ ನಿದರ್ಶನಗಳು ವರದಿಯಾಗಿವೆ. ಮುಂಬರುವ ಕೇಡುಗಳ ಎಚ್ಚರಿಕೆಯೂ ಒಳಧ್ವನಿಯಾಗಿ ಕಾಣಿಸಿಕೊಂಡು ಜನರ ಕಷ್ಟನಷ್ಟಗಳನ್ನು ನಿವಾರಿಸಲು ಸಾಧ್ಯವಾಗಿದೆ. ಕೆಲವು ವೇಳೆ ಮುಂದೆ ಆಗಲಿರುವ ಘಟನೆಗಳನ್ನು ಕನಸಿನಲ್ಲಿ ಕಂಡಂತೆ ಹೇಳಲಾಗಿದೆ. ಒಬ್ಬಾತ ತಾನು ಪ್ರಯಾಣ ಮಾಡಬೇಕೆಂದಿದ್ದ ಟೈಟಾನಿಕ್ ಎಂಬ ಹಡಗು ಪ್ರಯಾಣಮಧ್ಯದಲ್ಲಿ ಉರಿಯುತ್ತಿದ್ದಂತೆ ಕನಸು ಕಂಡಿದ್ದನ್ನೂ ಅದೇ ಕನಸು ಪುನಃ ಆಗಲು ತನ್ನ ಉದ್ದೇಶಿತ ಪ್ರಯಾಣವನ್ನು ರದ್ದುಮಾಡಿದ್ದನ್ನೂ ಅನಂತರ 1912ರ ಏಪ್ರಿಲ್ 14ನೆಯ ತಾರೀಖು ಆ ಹಡಗು ಛಿದ್ರವಾಗಿ ಕನಸು ನನಸಾದದ್ದನ್ನೂ ಓ ಕೋನರ್ ವರದಿ ಮಾಡಿದ್ದಾನೆ. ಇಂಥ ಸ್ವತಃಪ್ರೇರಿತ ಎಚ್ಚರಿಕೆಗಳು ರಕ್ಷಾಕವಚಗಳಿದ್ದಂತೆ. 1934ರಲ್ಲಿ ಅತಿಮಾನಸ ಸಂಶೋಧನಸಂಘ ಸಾಲ್ಟ್‍ಮಾರ್ಷ್‍ನ ಮುಂದಾಳುತನದಲ್ಲಿ ಕುತೂಹಲಕಾರಿಯಾದ 349 ಪೂರ್ವಬೋಧೆಯ ನಿದರ್ಶನಗಳನ್ನು ಪ್ರಕಟಿಸಿದೆ. ಡೇಲಿ ಪೋಸ್ಟ್ ಪತ್ರಿಕೆಯ ಮೊದಲ ಪುಟದಲ್ಲಿ ಯಾವ ಜಾಹೀರಾತು ಪ್ರಕಟಗೊಳ್ಳುವುದೆಂದು ಪತ್ರಿಕೆಯ ಪ್ರಕಟಣೆಯ 37 ದಿನಗಳ ಮುಂಚೆಯೇ ಭವಿಷ್ಯ ನುಡಿದ ವ್ಯಕ್ತಿಯೊಬ್ಬನ ವಿಷಯವನ್ನು ಪ್ರಿನ್ಸ್ ವರದಿಮಾಡಿದ್ದಾನೆ. ಡಾ. ಟಿಲ್‍ಯಾರ್ಡ್ ಯಾವ ರೀತಿಯಲ್ಲಿ ಮರಣ ಹೊಂದುವನೆಂಬುದನ್ನು ಲಾಪ್ಲಾಸ್ ಎಂಬುವನು ನಿಶ್ಚಿತವಾಗಿ ಮುಂಚೆಯೇ ಹೇಳಿದ್ದ. ಶ್ರೀಮತಿ ಎಡಿತ್ ತನ್ನ ಆಕಾಶವಾಣಿ ಪ್ರಸಾರಭಾಷಣದಲ್ಲಿ ಕೆಲವು ಕನಸುಗಳು ಸಾಂಕೇತಿಕವಾಗಿ ಭವಿಷ್ಯದ ಸೂಚನೆ ಕೊಟ್ಟಿದ್ದನ್ನು ಪ್ರಸ್ತಾಪಿಸಿದ್ದಾಳೆ. 
	
1933ರಿಂದ ಈಚೆಗೆ ಡ್ಯೂಕ್ ವಿಶ್ವವಿದ್ಯಾನಿಲಯದಲ್ಲಿ ಪೂರ್ವಬೋಧೆಯ ಪ್ರಾಯೋಗಿಕ ಅಧ್ಯಯನ ಪ್ರಾರಂಭವಾಗಿದೆ. ಘನವಿದ್ವಾಂಸರಾದ ಸ್ಟೋಯರ್ಟ್, ಹಚಿಸನ್, ಪ್ರ್ಯಾಟ್, ಹಂಫ್ರಿ ಮತ್ತು ಗಿಬ್ಬನ್ ಮೊದಲಾದವರು ಗಮನಾರ್ಹ ಫಲಿತಾಂಶಗಳನ್ನು ವರದಿ ಮಾಡಿದ್ದಾರೆ. ಹೀಗೆಯೇ ಇಂಗ್ಲೆಂಡಿನಲ್ಲೂ ಟೈರಲ್ ಎಂಬುವರು ಸ್ವಯಂಚಾಲಿತ ವಿದ್ಯುತ್‍ಯಂತ್ರವನ್ನು ಉಪಯೋಗಿಸಿ ಪೂರ್ವ ಬೋಧನಸಾಮಥ್ರ್ಯವನ್ನು ಪರೀಕ್ಷಿಸಿ ಬಹು ಉಪಯುಕ್ತ ಫಲಿತಾಂಶಗಳನ್ನು ವರದಿಮಾಡಿದ್ದಾರೆ. 
	
ಪೂರ್ವಬೋಧನವಿಚಾರ ವಿe್ಞÁನಕ್ಕೆ ಅಪರಿಚಿತ, ಹೊಸದು. ಇದಕ್ಕೆ ನಮ್ಮ ಮನಸ್ಸಿನ ಸ್ವಭಾವದ ಅe್ಞÁನವೇ ಕಾರಣ. 
ಮನೋಗತಿ: ವಸ್ತುವಿನ ಮೇಲೆ ಮನಸ್ಸಿನ ಪ್ರಭಾವ (ಸೈಕೊಕೈನೆಸಿಸ್). ಇದು ಅತಿಮಾನಸಶಾಸ್ತ್ರದ ಇನ್ನೊಂದು ಕೊಡುಗೆ. ಮೇಲು ಕುರ್ಚಿಗಳು ತಮಗೆ ತಾವೇ ಗಿರಿಕೆ ಹೊಡೆಯುವುದು, ಮೇಲಕ್ಕೇಳುವುದು, ಓಡಾಡುವುದು-ಇವು ಬಹು ಹಿಂದಿನಿಂದಲೂ ಗಮನಕ್ಕೆ ಬಂದಿದೆ. ರೀಷೆ ಈ ವಿದ್ಯಮಾನಗಳನ್ನು ದೂರಚಲನೆ (ಟೆಲೆಕೈನೆಸಿಸ್) ಎಂದು, ಯಾರ ಸಂಪರ್ಕವೂ ಇಲ್ಲದೆ ನಡೆಯುವ ವಸ್ತುಚಲನೆ ಎಂಬ ವಿವರಣೆ ನೀಡಿದ್ದಾನೆ. ತಾನಾಗೇ ಬಾಗಿಲ ಗಂಟೆ ಬಾರಿಸುವುದು, ಆಕಾಶವಾಣಿ, ಪ್ರೇತಧ್ವನಿಗಳು, ತಟ್ಟೆಗಳ ಒಡೆತ, ದೆವ್ವದ ಮನೆಗಳಲ್ಲಿ ನಿದ್ರಿಸುತ್ತಿರುವವರಿಗೆ ವಿಚಿತ್ರ ಧ್ವನಿ ಶಬ್ದಗಳಿಂದ ನಿದ್ರಾಭಂಗವಾಗುವುದು-ಇವನ್ನೆಲ್ಲಾ ನಿಶ್ಚಿತವಾಗಿ ವಿವರಿಸಲು ಸಾಧ್ಯವಾಗದಿದ್ದರೂ ಇವೆಲ್ಲ ಕಪಟವೆಂದು ನಿರಾಕರಿಸುವುದೂ ಅಸಾಧು. 

	ಇಂಥ ಸಾಮಥ್ರ್ಯವುಳ್ಳ ಅನೇಕ ವ್ಯಕ್ತಿಗಳು, ವಿe್ಞÁನಿಗಳ ಎದುರು ಈ ಚಮತ್ಕಾರಗಳನ್ನು ಮಾಡಿ ತೋರಿಸಿದ್ದಾರೆ. ತೋರಿಸಿದ್ದನ್ನು ಕಂಡವರಿದ್ದಾರೆ. ಪದಾರ್ಥಗಳ, ಅಥವಾ ವ್ಯಕ್ತಿಗಳ ಲಘಿಮಾವಸ್ಥೆ ಅನೇಕ ಸಂಶೋಧಕರಿಂದ ವರದಿಮಾಡಲ್ಪಟ್ಟ ಇನ್ನೊಂದು ಭೌತಿ, ವಾಸ್ತವಿಕಘಟನೆ, ಯೂಸೆಫಿಯಾ ಎಂಬ ಖ್ಯಾತವಾಹಕ ವ್ಯಕ್ತಿ (ಮೀಡಿಯಂ) ಒಂದು ಚೌಕಮೇಜನ್ನು ಲಘಿಮಾಶಕ್ತಿಯಿಂದ ನೆಲದಿಂದ ಮೇಲಕ್ಕೆಬ್ಬಿಸಿದ ಪ್ರದರ್ಶನವನ್ನು ರೀಷೆಯ ಸೂಚನೆಯ ಮೇಲೆ ಮಾಡಿತೋರಿಸಿದಳು. ಆ ವಾಹಕವ್ಯಕ್ತಿಯ ಬೆರಳತುದಿ ತಾಕಿದೊಡನೆ ಮೇಜು ವಾಲಿ, ತೂಗಾಡಿ ನೆಲದಿಂದ ಮೇಲಕ್ಕೆದ್ದಿತು. ವೀಕ್ಷಕರಲ್ಲಿ ಸರ್ ಆಲಿವರ್ ಲಾಡ್ಜ್, ಮೈಯರ್ಸ್ ಮುಂತಾದವರಿದ್ದರು. ಈ ಘಟನೆ ಹೇಗಾಯಿತೆಂಬುದನ್ನು ಚಲನಶಾಸ್ತ್ರ ಸ್ಪಷ್ಟಪಡಿಸಲಾರದು. 

	ರ್ರೆನರು ಈ ಘಟನೆಗಳನ್ನು ಮನೋಗತಿಗೆ ಸಂಬಂಧಿಸಿದವೆಂದು ಹೇಳಿ ಇವು ಅತೀಂದ್ರಿಯ ಪ್ರತ್ಯಕ್ಷದ ದೃಷ್ಟಾಂತಗಳು ಎಂದು ಸೂಚಿಸಿದ್ದಾರೆ. ಅವರು ಮನಸ್ಸು ಭೌತವಸ್ತುಗಳ ಚಲನೆಯನ್ನುಂಟುಮಾಡಬಲ್ಲದೇ ಎಂಬುದನ್ನು ಕಂಡುಹಿಡಿಯಲು ಪ್ರಯೋಗಗಳನ್ನು ನಡೆಸಿದರು. ಅತೀಂದ್ರಿಯ ದೃಷ್ಟಿಯಲ್ಲಿ ಯಾವುದೋ ರೀತಿಯಲ್ಲಿ, ವಸ್ತು ಮನಸ್ಸಿನ ಮೇಲೆ ಪರಿಣಾಮ ಮಾಡುತ್ತದೆ. ಆದರೆ ಮನೋಗತಿಯಲ್ಲಿ ಮನಸ್ಸು ವಸ್ತುವಿನ ಮೇಲೆ ಪರಿಣಾಮ ಮಾಡುತ್ತದೆ. ರ್ರೈನರು ಭೌತಿಕ ವಸ್ತುಗಳ ಮೇಲೆ ಮನಸ್ಸಿನ ಪರಿಣಾಮಗಳನ್ನು ಗುರುತಿಸಲು ಸೂಕ್ಷ್ಮ ಪ್ರಯೋಗ ತಂತ್ರಗಳನ್ನು ಅಳವಡಿಸಿದರು. ನಾವು ಮನಸ್ಸು ಮತ್ತು ಭೂತವಸ್ತುಗಳ ಮೇಲೆ ಪರಸ್ಪರ ಕ್ರಿಯೆ ಇದೆ ಎಂದು ಭಾವಿಸಿಕೊಂಡರೆ ಅಯತ್ನಚಲನೆಯ (ಎಕ್ಸ್‍ಟ್ರಾ ಮೋಟಲ್ ಆ್ಯಕ್ಷನ್) ಇರುವಿಕೆಯನ್ನು ತೋರಿಸಿದಂತಾಗುವುದು. 

	ಮನೋಗತಿ ಅಥವಾ ವಸ್ತುವ್ಯೂಹಗಳ ಮೇಲೆ ಮಾನಸಕ್ರಿಯೆಯ ವಿಷಯ ಹೊಸದೇನಲ್ಲ. ಅನೇಕ ತನಿಖೆಗಾರರು ಆ ರೀತಿಯ ಭೌತಿಕ ವಿದ್ಯಮಾನಗಳನ್ನು ವರದಿಮಾಡಿದ್ದಾರೆ. ಅಲೆಕ್ಸಿಸ್ ಕ್ಯಾರಲ್‍ರವರ ಮ್ಯಾನ್ ದಿ ಅನ್ನೋನ್ ಎಂಬ ಗ್ರಂಥದಲ್ಲಿ ನಂಬಿಕೆ ಮತ್ತು ವಿಶ್ವಾಸದಿಂದ ರೋಗನಿವಾರಣೆ ಮಾಡುವ ಪದ್ಧತಿಯ (ಫೇತ್ ಹೀಲಿಂಗ್) ಹಿಂದೆ ಸಲಹೆ ಮತ್ತು ಮಾನಸೇಚ್ಛಿತ ಭೌತಕ್ರಿಯೆಯ ಪರಿಣಾಮಗಳಿವೆ ಎಂದು ಹೇಳಲಾಗಿದೆ. ಹಾಗಿದ್ದಲ್ಲಿ, ಮಾನಸೇಚ್ಛಿತ ಭೌತಕ್ರಿಯೆ ವೈದ್ಯಕ್ಷೇತ್ರಕ್ಕೆ ನುಸುಳಿಕೊಂಡಿದೆ ಎಂದು ಹೇಳಬಹುದು. ಅನೇಕ ಚರ್ಮದ, ಜೀರ್ಣಾಂಗವ್ಯೂಹದ ಮತ್ತು ಇತರ ದೇಹಭಾಗಗಳ ವ್ಯಾಧಿಗಳಿಗೆ ಮನೋಸ್ಥಿತಿ ಕಾರಣ ಎಂದು ಹೇಳಲಾಗಿದೆ. ವಶ್ಯಸುಪ್ತಸ್ಥಿತಿಯಲ್ಲಿ ಮೈಮೇಲೆ ಬೊಬ್ಬೆಗಳನ್ನು ಬರಿಸಿರುವುದು ವರದಿಯಾಗಿದೆ. ಇನ್ನೂ ಬೆರಗುಗೊಳಿಸುವ ವಿದ್ಯಮಾನವೆಂದರೆ ಚರ್ಮಬರೆಹ (ಡರ್ಮೊಗ್ರಫಿ). ಇಂಥ ವಾಸ್ತವ ಸಂಗತಿಗಳು ನಮ್ಮ ಆಸಕ್ತಿ ಮತ್ತು ವಿಚಾರಪರತೆಯನ್ನು ಕೆರಳಿಸಲು ಸಾಕು. 

	ಆದಿಮಾನವ ಯಕ್ಷಿಣಿವಿದ್ಯೆಯಲ್ಲಿ, ಇಂದ್ರಜಾಲದಲ್ಲಿ ನಂಬಿಕೆ ಇಟ್ಟಿದ್ದನೆಂಬುದಕ್ಕೆ ಪುರಾತನ ಜನರ ವಿಶಿಷ್ಟಸಂಸ್ಕøತಿ ಮತ್ತು ಪವಾಡಗಳಲ್ಲಿನ ನಂಬಿಕೆಗಳು ನಿದರ್ಶನಗಳಾಗಿವೆ. ಭಾರತದ e್ಞÁನಿಗಳು ಮನುಷ್ಯ ತನ್ನ ದೇಹದಲ್ಲಡಗಿರುವ ಕುಂಡಲಿನೀಶಕ್ತಿಯನ್ನು ಸುಷುಮ್ನಾನಾಡಿಯ ಮೂಲಕ ಕ್ರಮ ಕ್ರಮವಾಗಿ ಊಧ್ರ್ವಗೊಳಿಸಿದಲ್ಲಿ ಆವರ್ತಕೇಂದ್ರಗಳಲ್ಲಿ ನಿಶ್ಚಿತಕ್ರಮದಲ್ಲಿ ಅಣಿಮಾದಿ ಅಷ್ಟಸಿದ್ಧಿಗಳುಂಟಾಗಿ ಅತಿ ಪ್ರಾಜ್ಞವಾಗಿ ಅತೀಂದ್ರಿಯನಾಗಿ ಕಾಲ ದೇಶ ನಾಮ ರೂಪ ಆಕಾರಗಳ ಸೀಮೆ ಮೀರಿ ವಿಶ್ವe್ಞÁನಿಯಾಗಬಹುದೆಂದು ಹೇಳುತ್ತಾರೆ. ಅಂಥವರಿಗೆ ದೂರವಾಣಿ, ದೂರದರ್ಶನ, ದೂರಸ್ಪರ್ಶನ, ಭವಿಷ್ಯವಾಣಿ, ದೂರಗಮನ, ಅಣಿಮಾ, ಲಘಿಮಾ ಮುಂತಾದ ವಿಶೇಷಯೋಗ್ಯತೆಗಳು ಸಿದ್ಧಿಸಿ ಅವರು ಮಹಾತ್ಮರೂ ಅಥವಾ ಪವಾಡಪುರುಷರೂ ಎನಿಸಿಕೊಳ್ಳುತ್ತಾರೆ. ಪತÀಂಜಲಿಯ ಯೋಗಸೂತ್ರದ ಹಠಯೋಗಸಂಹಿತೆಯಲ್ಲೂ ಇತ್ತೀಚಿನ ಯೋಗವಾಸಿಷ್ಠ ಎಂಬ ಗ್ರಂಥದಲ್ಲೂ ಗೂಢವೂ ದುರ್ಗಮವೂ ಆದ ಈ ವಿಷಯಗಳ ವಿವರಗಳಿವೆ. 

ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ಮೆಸ್ಮರ್ ಎಂಬುವನು ಆಗಿಂದಾಗ್ಗೆ ತನ್ನ ಪರೀಕ್ಷೆಗೊಳಗಾದ ಅಪ್ರe್ಞÁವಸ್ಥಿತ ವ್ಯಕ್ತಿಗಳಲ್ಲಿ ಅತೀಂದ್ರಿಯ ದೃಷ್ಟಿಯಂತೆ ತೋರುವ ಚಿಹ್ನೆಗಳನ್ನು ಕಂಡ. ಅಲ್ಲದೆ ನಿದ್ರೆಯಲ್ಲಿ ಓಡಾಡುವ ಕೆಲವು ವ್ಯಕ್ತಿಗಳು ಭೂತ ಭವಿಷ್ಯದ್ವಿದ್ಯಮಾನಗಳನ್ನು ಸ್ಪಷ್ಟವಾಗಿಕಾಣುವುದನ್ನು ತೋರಿಸಿದ. 1825ರಲ್ಲಿ ಹಸ್ಸನ್ ನಿದ್ರಾವಸ್ಥೆಯಲ್ಲಿ ಅಯತ್ನಚಲನೆಯಾಗುವುದನ್ನು ತೋರಿಸಿ, ಈ ವಿಶೇಷಾವಸ್ಥೆಗಳು ಅತೀಂದ್ರಿಯ ದೃಷ್ಟಿಗೆ ಪೋಷಕವಾಗಿವೆಯೆಂದು ಹತ್ತೊಂಬತ್ತನೆಯ ಶತಮಾನದುದ್ದಕ್ಕೂ ಫ್ಲೆಮೇರಿಯನ್, ಮೈಯರ್ಸ್, ಗರ್ನಿ, ಪ್ಯಾಡ್‍ಮೋರ್, ರೀಷೆ, ಟಿಚ್ನರ್, ಸಿಡ್ಜ್‍ವಿಕ್, ಬ್ಯಾರೆಟ್, ಸಿಂಕ್ಲೇರ್ ಮತ್ತು ಇತರರು ಅಮೆರಿಕ, ಇಂಗ್ಲೆಂಡ್ ಮತ್ತು ಜರ್ಮನಿಗಳಲ್ಲಿ ವಿವಿಧವಿಧಾನಗಳಲ್ಲಿ ಅತೀಂದ್ರಿಯ ಅರಿವಿನ ಮೇಲೆ ಪ್ರಯೋಗಗಳನ್ನು ನಡೆಸಿದರು. 

	ಪ್ರೊಫೆಸರ್ ರ್ರೆನ್, ಆ್ಯಡಮ್, ಮೆಗ್ಡುಗಲ್, ಜೆóನರ್, ಲಂಡ್‍ಹೋಮ್ ಇವರು ಇಸ್ಪೀಟು ಎಲೆ ಊಹಿಸುವ (ಕಾರ್ಡ್ ಗೆಸ್ಸಿಂಗ್) ವಿಧಾನದಿಂದ ಅತೀಂದ್ರಿಯ ಅರಿವಿನ ಬಗ್ಗೆ ಪ್ರಯೋಗಗಳನ್ನು ನಡೆಸಿದರು. ಇಂದು ಈ ಪ್ರಯೋಗಗಳಿಗೆ ರೇಖಾ ಚಿತ್ರಗಳು, eóÉನರ್ ಎಲೆಗಳು ಎಲ್ಲೆಲ್ಲೂ ಬಳಕೆಯಲ್ಲಿವೆ. ಮೈಸೂರು ವಿಶ್ವವಿದ್ಯಾನಿಲಯದಲ್ಲೂ ದಿವಂಗತ ಪ್ರೊ. ಎಂ. ವಿ. ಗೋಪಾಲಸ್ವಾಮಿಯವರ ಮಾರ್ಗದರ್ಶನದಲ್ಲಿ ಅತೀಂದ್ರಿಯ ಅರಿವಿನ ಪರೀಕ್ಷೆಗಳಿಗೆ ಚಿತ್ರ ರೂಪ ಪ್ರಾಣಿ ಬಣ್ಣ ಶಬ್ದ ಭಾವನೆ- ಇವುಗಳನ್ನೂ ಮನೋಗತಿ ಪರೀಕ್ಷೆಗಳಿಗೆ ಉರುಳುವ ದಾಳ ಕವಡೆ ನಾಣ್ಯ ಮುಂತಾದುವನ್ನೂ ಉಪಯೋಗಿಸಲಾಯಿತು. ಆ ಪ್ರಯೋಗಗಳನ್ನು ಸ್ನೇಹಿತರು ಮಕ್ಕಳು ಗಂಡ-ಹೆಂಡಿರು ತಂದೆ-ಮಕ್ಕಳು ಒಂದೇ ಬಗೆಯ ಅವಳಿಜವಳಿಗಳು, ಬ್ರಾಕ್ರೀಯ ಅವಳಿಮಕ್ಕಳು - ಇವರುಗಳ ಮೇಲೆ ವಿವಿಧ ಸ್ಥಿತಿಗತಿಗಳಲ್ಲಿ ನಡೆಸಲಾಯಿತು. ದಾಳಗಳನ್ನು ಕೈಯಿಂದಲೂ ಯಾಂತ್ರಿಕವಾಗಿಯೂ ಉರುಳಿಸಲು ಸುಧಾರಿತ ಸಲಕರಣೆಗಳನ್ನು ಅಳವಡಿಸಿಕೊಳ್ಳಲಾಗಿತ್ತು.

1957-59ರಲ್ಲಿ ಅದೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಾ.ಕುಪ್ಪಸ್ವಾಮಿಯವರ ಮಾರ್ಗದರ್ಶನದಲ್ಲಿ ಎಲ್.ನಾರಾಯಣರಾವ್ ಪವಾರರೊಡನೆ ಅಮೆರಿಕದ ಡಾ.ಗಾರ್ಡಿನರ್ ಮರ್ಫಿಯವರ ಕೋರಿಕೆಯ ಮೇಲೆ ಅತೀಂದ್ರಿಯ ಅರಿವಿನ ಮೇಲೆ ಬೌದ್ಧಿಕ ಶಿಕ್ಷಣದ ಪ್ರಭಾವ, ಸಾಮೂಹಿಕ ಅಥವಾ ವೈಯಕ್ತಿಕ ಪ್ರಭಾವ, ವರ್ಗಾವಣೆಯ ಮೇಲೆ ಅಂತರದ ಪ್ರಭಾವ - ಇವುಗಳನ್ನು ಕುರಿತು ಅನೇಕ ಪರೀಕ್ಷೆಗಳನ್ನು ನಡೆಸಲಾಯಿತು. ಅವುಗಳ ಫಲಿತಾಂಶಗಳು ಅರ್ಥಗರ್ಭಿತವೂ ಕುತೂಹಲ ಪ್ರಚೋದಕವೂ ಆಗಿವೆ.
ಕೇವಲ ಬೌದ್ಧಿಕ ಕುತೂಹಲದಿಂದ ಹುಟ್ಟಿ, ವಿಹಾರಕ್ಷೇತ್ರವಾಗಿ ಬೆಳೆದರೂ ಅತಿಮಾನಸಕ್ಷೇತ್ರದ ಅಧ್ಯಯನ ಶಾಸ್ತ್ರೀಯತೆಯ ಶಿಸ್ತು, ಕಟ್ಟುನಿಟ್ಟು, ಪ್ರೌಢಿಮೆಗಳನ್ನು ಈ ಶತಮಾನದಲ್ಲಿ ಪಡೆಯಿತು. ಇತರ ವಿದ್ಯಾಂಗಗಳ ಪ್ರಗತಿಗೆ ಹೋಲಿಸಿದರೆ ಇದರ ಬೆಳವಣಿಗೆ ನಿಧಾನವೆಂದು ತೋರುವುದಾದರೂ ಈ ಅಧ್ಯಯನ ಮನಶ್ಯಾಸ್ತ್ರದ ಒಂದು ಮಹತ್ತರ ವಿಭಾಗವಾಗಿ ಬೆಳೆದುಬಂದಿದ್ದು, ತನ್ನದೇ ಆದ ವಿಶಿಷ್ಟ ಅಸ್ತಿತ್ವವನ್ನು ಪಡೆದಿರುವುದು ವಿಶೇಷ ಆಶಾದಾಯಕ ಸಂಗತಿ. ಮನುಷ್ಯನ ವ್ಯಕ್ತಿತ್ವದ ನಿರಂತರ ಪೂರ್ಣವಿಕಾಸಕ್ಕೆ ಅತಿಮಾನಸದಿಂದ ಪಡೆಯಬಹುದಾದ ಸ್ಫೂರ್ತಿ, ಶಕ್ತಿ ಮತ್ತು ಸಹಾಯ ಅಮಿತವಾಗಿದೆ ಎಂಬ ಅರಿವು ಈಗೀಗ ದೃಢವಾಗುತ್ತಿದೆ.										
(ಎಲ್.ಎನ್.ಪಿ.)